• Download Dailyhunt App

Sign UP / Sign In



 

Category


Bisila Bevu ( ಬಿಸಿಲ ಬೇವು )

Author: ಡಾ. ಡಿ. ಕೆ. ಚಿತ್ತಯ್ಯ ಪೂಜಾರ್

Kannada

120

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಆದಿಮ ಹಂತದಲ್ಲಿ ಮನುಷ್ಯನ ಆತಂಕ ಮತ್ತು ಆಹ್ಲಾದಗಳ ಫಲವಾಗಿ ಹುಟ್ಟಿಕೊಂಡ ಆರಾಧನಾ ವಿಧಾನವು ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಎಡೆ ಮಾಡಿಕೊಟ್ಟಿತು. ಮನುಷ್ಯನ ಸುಪ್ತ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿದ ಶ್ರದ್ಧೆ, ಧಾರ್ಮಿಕ ಪ್ರಜ್ಞೆ, ದೈವಭಯ ಇತ್ಯಾದಿಗಳು ಆಚರಣೆಗಳ ಅನುಷ್ಠಾನಕ್ಕೆ ಪ್ರೇರೇಪಿಸಿದವು. ಹೀಗಾಗಿ ಆಚರಣೆಗಳು ಮತ್ತು ಸಂಪ್ರದಾಯಗಳು ವ್ಯಕ್ತಿಯ ಸಾಮಾಜಿಕ ಮತ್ತು ಸಾಂಸ್ಕøತಿಕ ಬದುಕಿನೊಂದಿಗೆ ಜೀವಂತ ಸಂಬಂಧವನ್ನಿರಿಸಿಕೊಂಡವು. ಭಾಷೆ, ನಂಬಿಕೆ, ಸಂಪ್ರದಾಯ, ಆಚರಣೆಗಳೆಲ್ಲವೂ ಸಂಸ್ಕøತಿಯ ಅವಿಭಾಜ್ಯ ಘಟಕಗಳಾಗಿ ಬೆಳೆದು ಬಂದವು.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ಇತ್ತೀಚೆಗೆ ನನ್ನ ಸ್ನೇಹದ ಪರಧಿಗೆ ಬಂದವರು. ಕನ್ನಡ ಸಾಹಿತ್ಯ ಮತ್ತು ಜಾನಪದ ಹಾಗೂ ಶಾಸನ ಅಧ್ಯಯನವನ್ನು ಗಂಭೀರವಾಗಿ ಸ್ವೀಕರಿಸಿದವರು. ಈಗಾಗಲೇ `ನಿಡುಗಲ್ಲು ದುರ್ಗದ ಕಥನ’ ಜೋಳಿಗೆ ಹೊನ್ನು, ನಿಜದ ನೆಲೆ, ಕನ್ನಡ ಶಾಸನಾಧ್ಯಯನದ ಬಹುಮುಖೀ ಆಯಾಮಗಳು ಇತ್ಯಾದಿ ಕೃತಿಗಳ ಮೂಲಕ ಸಂಸ್ಕೃತಿ ಆಸಕ್ತರ ಗಮನ ಸೆಳೆದವರು. ಕನ್ನಡ ಸಾಹಿತ್ಯ ಮತ್ತು ಜಾನಪದಕ್ಕೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ವಿವಿಧ ಸಂಚಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದು. ಇದೀಗ ಆಚರಣೆಗಳಿಗೆ ಸಂಬಂಧಿಸಿದಂತೆ `ಬಿಸಿಲ ಬೇವು’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಬಿಸಿಲ ಬೇವು ಕೃತಿಯು ಬಹುಭಾಷಿಕ ನೆಲೆಗಳ ತಿಳಿವಳಿಕೆಯನ್ನು ಅಪೇಕ್ಷಿಸುವ ಪಾವಗಡದಂತಹ ಗಡಿಭಾಗದಿಂದ. ನಿರ್ಲಕ್ಷಿತ ಕ್ಷೇತ್ರವೊಂದರಿಂದ ಅಧ್ಯಯನ ಯೋಗ್ಯ ಮಾಹಿತಿಗಳನ್ನು ಕಲೆಹಾಕಿ ಚಿಂತನೆಗೆ ಒಳಪಡಿಸಿರುವ ಚಿತ್ತಯ್ಯನವರ ಈ ಪ್ರಯತ್ನ ಸ್ತುತ್ಯಾರ್ಹವಾದುದು.

  • Release Date:
  • Book Size: 909 KB
  • Language: Kannada
  • Category: Indian Writing

    Be the first to rate




Top

If you want to read ebooks please download our app in your favorite mobile