• Download Dailyhunt App

Sign UP / Sign In



 

Category


Doorada Pada ( ದೂರದ ಪದ )

Author: ಮಹಾಂತಪ್ಪ ನಂದೂರ

Kannada

75

  • My Rating


  • Review Title


  • Review Comment



To read this book you need to Download the Dailyhunt App on your phone. Available in Android, Windows & Iphone

ಎದೆಯ ನಾದದಲ್ಲಿ ಪದವ ಪವಣಿಸುತ್ತಿರುವಾಗ ಬೆಳಕು ಬೆರಗಿನ ಬದಿಗೆ ಹಾಡು ಕೇಳಿಸುತ್ತಿತ್ತು ಎಂದು ಭಾವಿಸುವ ನಸುಕೊ೦ದು ಹಸುಗೂಸು'ರಾ'ವುಗಿಲೆಲಾ ಮುಂಜಾವು' ಎಂಬಂಥ ನುಡಿಚಿತ್ರಗಳನ್ನು ಕೊಡಬಲ್ಲ ಮಹಾಂತಪ್ಪ ನಂದೂರ ಅವರದು ಸಹಜವಾದ ಕವಿ ಹೃದಯ ಎಂಬುದಕ್ಕೆ ಎರಡು ಮಾತಿಲ್ಲ, ಭಾವದ ಬಾಗಿಲು ತೆರೆದು ಬುದ್ದಿಯನ್ನು ಬರಮಾಡಿಕೊಳ್ಳುವುದು ಅವರ ಕಾವ್ಯರಚನೆಯ ರೀತಿ ಎಂಬುದಕ್ಕೆ 'ಜಾಗತೀಕರಣ' ‘ನಾನೊಂದು ಕನಸ ಕಂಡೆ’ ‘ಹೊಲೆಗೂಸು’ ಮೊದಲಾದ ಹಲವು ಕವನಗಳನ್ನು ಉದಾಹರಿಸಬಹುದು. 'ಹಾಡು ಕಟ್ಟುವ ಘಳಿಗೆ ಮೋಡ ಚಂದಿರನಾವರಿಸಿ, ಕೊನೆಯ ಸಾಲಿನ ಅರ್ಥ-ಪೂರ್ಣ-ಅರ್ಧ’ ಎಂಬುದು ಕವಿಗೆ ಗೋಚರಿಸದೆಯಿಲ್ಲ. ಮೂಢನಂಬಿಕೆಗಳ ವಿರಾಟ್ ಸ್ವರೂಪವನ್ನು ‘ನಮ್ಮೂರ ಸುದ್ದಿ’ಯಲ್ಲಿ ಕೊಟ್ಟಂತೆ, ‘ಕೈಚಾಚಿದೆ ಆಕಾಶದತ್ತ’ಸದಲ್ಲಿ ಸುನಾಮಿ ದುರಂತವನ್ನು ಪರಿಣಾಮಕಾರಿಯಾಗಿ ಚಿತ್ರಿಸಬಲ್ಲರು, 'ನಾನು ನೋಡುತ್ತಲಿರಲು' ನಗರದ · ವರ್ತುಲದಲ್ಲಿ'ಯಂಥ ಕವಿತೆಗಳಲ್ಲಿ ಒಡಮೂಡಿದ ಚಿತ್ರಗಳು ಬಿಡಿಬಿಡಿಯಾಗಿ ಕಂಡರೂ ಮುಖ್ಯ ಆಶಯಕ್ಕೆ ಜೋಷಕವಾಗಿ ಕೊನೆಗೊಳ್ಳುತ್ತವೆ. ಈ ಸಂಗ್ರಹದ ಎರಡನೆಯ ಭಾಗದಲ್ಲಿರುವ ಸುನೀತ ಮಾದರಿಯ ಪದ್ಯಗಳು ಆ ಪ್ರಕಾರದ ನಿಯಮಗಳನ್ನು ನಿಯಮಿತವಾಗಿ ಪಾಲಿಸದಿದ್ದರೂ ಪ್ರಯೋಗದ ದೃಷ್ಟಿಯಿಂದ ಗಮನಾರ್ಹವಾಗಿವೆ. ‘ಮಂಗಳದ ಬೆಳಕು’ ‘ಆರೂಢ’ ‘ಜಿನುಗು ಮಳೆ’ ‘ಮಾರ್ಗ’ ಮೊದಲಾದವು ಕವಿಯ ಚಿತ್ರಶಕ್ತಿಯನ್ನು ಸಮರ್ಥಿಸುವಂತಿದೆ. ತಮ್ಮ ಎರಡನೆಯ ಕೃತಿ 'ದೂರದ ಪದ'ದಿಂದ ಕಾವಾಸಕ್ತರಿಗೆ ಹೆಚ್ಚು ಸಮೀಪವಾಗುತ್ತಿರುವ ಈ ಕವಿ ಇನ್ನೂ ಉತ್ತಮ ಕೃತಿಗಳನ್ನು ಕೊಡಬಲ್ಲರೆಂಬ ಭರವಸೆ ಮೂಡಿಸಿರುವುದು ಅಭಿನಂದನೀಯ.

  • Release Date:
  • Book Size: 949 KB
  • Language: Kannada
  • Category: Kaavya

  • 2017-09-05 13:19:43.0

    ABHISHEK NANDUR






Top

If you want to read ebooks please download our app in your favorite mobile